ಬಯಾಂಕಲಾ ಎಂಬುದು ಚೀನಾದ ಶಾಂಘೈನಲ್ಲಿ ಶುರುವಾದ ನೈಸರ್ಗಿಕ ಚರ್ಮದ ಆರೈಕೆಯ ಬ್ರಾಂಡ್. ಇದನ್ನು ಫ್ರೆಂಚ್ ಉದ್ಯಮಿ ಜೀನ್ ಝಿಮ್ಮರ್ಮ್ಯಾನ್ ರೂಪಿಸಿದ್ದಾರೆ. ಝಿಮ್ಮರ್ಮ್ಯಾನ್ ಅವರು ಚೀನಾದ ಗಿಡಮೂಲಿಕೆ ತಜ್ಞರೊಂದಿಗೆ ಚರ್ಚಿಸಿ ಈ ಬ್ರಾಂಡ್ ಅನ್ನು ಸ್ಥಾಪಿಸಿದರು. ಅವರು ಚೀನಾದಲ್ಲಿ ಲೇನ್ ಕ್ರಾಫರ್ಡ್ ಡಿಪಾರ್ಟ್ಮೆಂಟ್ ಸ್ಟೋರ್‌ಗಳ ಜನರಲ್ ಮ್ಯಾನೇಜರ್ ಆಗಿದ್ದಾಗ, ಉನ್ನತ ಮಟ್ಟದ ಚೀನೀ ಬ್ರಾಂಡ್ ಅನ್ನು ರಚಿಸಲು ನಿರ್ಧರಿಸಿದರು. ಇದೇ ಬಯಾಂಕಲಾ ಎಂಬ ಬ್ರಾಂಡ್‌ಗೆ ಸ್ಫೂರ್ತಿಯಾಯಿತು. ಹಳದಿ ನದಿ ಮೂಲವನ್ನು ಹೊಂದಿರುವ ದಕ್ಷಿಣ-ಮಧ್ಯ ಕಿಂಗ್ಹೈನಲ್ಲಿರುವ ಬಯಾನ್ ಹರ್ ಪರ್ವತಗಳ ಹೆಸರನ್ನು ಈ ಬ್ರಾಂಡ್ಗೆ ಇಡಲಾಗಿದೆ. ಈ ಬ್ರ್ಯಾಂಡ್ನ ಸಂಕೇತವೆಂದರೆ "ಹುಲು", ಸಾಂಪ್ರದಾಯಿಕವಾಗಿ ಒಂದು ಪಾತ್ರೆಯಾಗಿ ಬಳಸಲ್ಪಡುವ ಮತ್ತು ಚೀನೀ ಔಷಧಾಲಯದ ಸಂಕೇತವಾಗಿ ಮುಂಭಾಗದಲ್ಲಿ ನೇತುಹಾಕಲ್ಪಡುವ ಸೋರೆಕಾಯಿ ರೂಪದ ಚೀನೀ ಬಾಟಲಿ. == ಸಾಂಪ್ರದಾಯಿಕ ಚೀನೀ ಪದಾರ್ಥಗಳು == ಸಾಂಪ್ರದಾಯಿಕ ಚೀನೀ ಗಿಡಮೂಲಿಕೆ ಔಷಧದ ಪಾಕವಿಧಾನಗಳನ್ನು ಹೊಂದಿರುವ ಮೊದಲ ಚೀನೀ "ಐಷಾರಾಮಿ ಚರ್ಮದ ಆರೈಕೆ ಬ್ರಾಂಡ್" ಎಂದು ಬಯಾಂಕಲಾ ಹೇಳಿಕೊಂಡಿದೆ. ಬ್ರ್ಯಾಂಡ್ ಪರಿಕಲ್ಪನೆಯು ಚೀನೀ ಸಸ್ಯಶಾಸ್ತ್ರ ಸಾಂಪ್ರದಾಯಿಕವಾಗಿ ಬಳಸಲಾಗುವ ೫ ಪದಾರ್ಥಗಳನ್ನು ಒಳಗೊಂಡಿದೆ. ಈ ಬ್ರಾಂಡ್ ಅನ್ನು ದಕ್ಷಿಣ ಚೀನಾ ಗುವಾಂಗ್ಝೌನಲ್ಲಿ ತಯಾರಿಸಲಾಗುತ್ತದೆ ಮತ್ತು ಕೆಲವು ಉತ್ಪನ್ನಗಳನ್ನು ಚೀನಾದಲ್ಲಿ ಸಾವಯವ ಎಂದು ಪ್ರಮಾಣೀಕರಿಸಲಾಗಿದೆ. ಸಾಂಪ್ರದಾಯಿಕ ಚೈನೀಸ್ ಲೂನರ್ ಕ್ಯಾಲೆಂಡರ್ ಪ್ರಕಾರ ಪ್ರತಿ ಉತ್ಪನ್ನವನ್ನು ಹಳದಿ ನದಿಯ ಮೂಲದಿಂದ ಶುದ್ಧ ನೀರನ್ನು ಬಳಸಿ ರೂಪಿಸಲಾಗಿದೆ ಎಂದು ಝಿಮ್ಮರ್ಮ್ಯಾನ್ ಹೇಳುತ್ತಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಅಧಿಕೃತ ಜಾಲತಾಣ 2022-10-06 ವೇಬ್ಯಾಕ್ ಮೆಷಿನ್ ನಲ್ಲಿ.